Author : SAISUTHE
ISBN No : 24082022K15
Language : Kannada
Categories : KANNADA
Sub Categories : FICTION
Publisher : SUDHA ENTERPRISES
ಸಂಸ್ಕೃತದಲ್ಲಿ ಒಂದು ಸುಂದರವಾದ ಅರ್ಥಪೂರ್ಣವಾದ ಜೀವನಕ್ಕೆ ಅತ್ಯಂತ ಹತ್ತಿರವಾದ ಅಮೂಲ್ಯರತ್ನದಂತ ಸುಭಾಷಿತವಿದೆ. ಒಂದು ಮಳೆಯ ಹನಿಯು ಕಾದಕಬ್ಬಿಣದ ಮೇಲೆ ಉದುರಿದರೆ ಕ್ಷಣಮಾತ್ರದಲ್ಲಿ ಆವಿಯಾಗಿ ಹೋಗುತ್ತದೆ. ಅದೇ ಮಳೆಯ ಹನಿ ತಾವರೆ ದಳಗಳ ಮೇಲೆ ಉದುರಿದರೆ ಕೆಲವು ಗಂಟೆಗಳಕಾಲ ಫಳಫಳ ಎನ್ನುತ್ತೆ. ಅದೇ ಹನಿ ಸಮುದ್ರದ ನೆತ್ತಿಯ ಮೇಲೆ ಬಿದ್ದರೆ ಅದು ಶಾಶ್ವತವಾದ ಹೊಳೆಯುವ ಸ್ವಾತಿ ಮುತ್ತಾಗುತ್ತದೆ.